🧠 Pakshaghata (Paralysis): Understanding, Causes, and Ayurvedic Management
📊 Prevalence in India
Stroke, also known as paralysis or “lakva,” ranks as the second leading cause of death worldwide, following heart disease. Shockingly, about 50% of those affected are left with long-term disabilities. In India, approximately 400 individuals per 100,000 are impacted, turning stroke into a major personal, medical, and social challenge.
Lack of rehabilitation centers, financial constraints, limited awareness, and confusion due to multiple treatment options (allopathy, Ayurveda, naturopathy) often lead to patients mismanaging their recovery journey.
🧕 What is Paralysis vs. Stroke?
Many assume stroke and paralysis are the same. Paralysis is a general term for loss of muscle function, regardless of cause. Stroke is a specific event where brain function is disrupted due to a blocked or ruptured blood vessel. About 90% of stroke cases cause opposite-side paralysis (e.g., right-brain stroke leads to left-body paralysis), confusion, visual problems, speech and balance issues, and emotional disturbances.
⚠️ Major Causes
Vata-aggravating foods: dry, cold, undernourishing meals
Excess exercise, lack of sleep, excessive sex, fasting
Suppression of natural urges
Mental distress
Physical trauma to head or spine
🩺 Risk Factors
High blood pressure
Diabetes
Smoking, alcohol, tobacco use
High salt intake
Obesity
Sedentary lifestyle
More common in men, but women have higher stroke-related mortality
💪 Recovery Path
Stroke recovery can be unclear and difficult, but it is possible. Initial fatigue and excess sleep are normal. The first 3 months are typically the most progressive, after which improvement slows. Persistent effort, including physical, cognitive, and emotional therapy, helps the brain rewire and regain lost function.
🔍 When to Seek Medical Help
Seek immediate attention if the following symptoms are observed:
Trouble speaking or understanding
Confusion
Facial drooping, limb weakness, pain
Vision problems
Severe headache with nausea or vomiting
Balance loss, unsteady walking
❓ Why Stroke Is Complex
Stroke outcomes depend on:
Patient age and overall health
Brain region affected
Severity of stroke
Quality of post-stroke care Because of so many variables, exact predictions are difficult, often causing confusion and delay in care decisions.
🏥 Stroke Management
Management occurs in two stages:
Emergency Care to restore blood flow and minimize brain swelling
Rehabilitation to help regain lost motor, sensory, and cognitive abilities
🌿 Ayurvedic Rehabilitation at Yogakshema Ayurveda Hospital
Our approach includes:
Shirodhara – Relieves brain inflammation
Nasya/Pradhmana – Revives consciousness and improves neurological functions
Taila Abhyanga – Customized oil massages
Svedana – Herbal steam therapy for improved circulation
Mridu Virechana – Mild purgation to balance doshas
Shiro Basti / Shiro Pichu – Oil therapies to calm the nervous system
Ksheera Dhooma / Navara Sveda / Kayaseka / Basti – Strengthens nerves and improves mobility
Yoga, Dhyana, Counseling – Restores emotional and mental balance
🍽️ Dietary and Lifestyle Guidelines
Diet:
Easy-to-digest foods
Fruits, vegetables, whole grains
Avoid fried, processed, spicy foods
Drink plenty of water and herbal teas
Lifestyle:
Regular gentle exercise and yoga
Stress management through meditation
7–8 hours of sleep
Maintain healthy weight
Avoid smoking and alcohol
⚰️ Mortality Risk
28% mortality within 30 days
41% within 1 year
60% within 2–5 years
Common causes include heart disease, cancer, suicide, or accidents.
✅ Conclusion
Beating stroke requires timely medical care, rehabilitation, emotional support, and lifestyle changes. With patience, knowledge, and expert care, stroke recovery is absolutely possible.
ಪಕ್ಷಾಘಾತ –ಸ್ಟ್ರೋಕ್
ವಿಶ್ವದಲ್ಲಿ ಮಾರಣಾಂತಿಕ ಎನಿಸಿರುವ ಖಾಯಿಲೆಗಳ ಪೈಕಿ ಲಕ್ವ ಅಥವಾ ಪಕ್ಷಾಘಾತಕ್ಕೆ ಎರಡನೇ ಪ್ರಧಾನ ಸ್ಥಾನವಿದೆ. ಮೊದಲನೆಯದು ಹೃದ್ರೋಗ .ಅಂತೆಯೇ ,ಈ ರೋಗಕ್ಕೆ ತುತ್ತಾದ 50 ಪ್ರತಿಶತ ಜನರು ಶಾಶ್ವತ ಅಸ್ವಸ್ಥತೆಗೆ ಅಥವಾ ಅಂಗ ವೈಕಲ್ಯತೆ ಗೆ ಒಳಗಾಗಿರುತ್ತಾರೆ ಎಂಬುದು ಜನರಲ್ಲಿ ಗಾಬರಿ ಹುಟ್ಟಿಸುವ ಇನ್ನೊಂದು ಅಂಶ.
ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಲಕ್ಷಕ್ಕೆ ಸುಮಾರು 400 ಜನಕ್ಕೆ ಈ ತೊಂದರೆ ಕಂಡು ಬರುತ್ತದೆ ಹಾಗೂ ಇದು ಒಂದು ವೈಯುಕ್ತಿಕ ,ಕೌಟುಂಬಿಕ , ವೈದ್ಯಕೀಯ ಹಾಗು ಸಾಮಾಜಿಕ ಸಮಸ್ಯೆ ಆಗಿಯೇ ಉಳಿದಿದೆ . ಭಾರತ ದೇಶದಲ್ಲಿ ಲಕ್ವಕ್ಕೆ ಒಳಗಾದ ರೋಗಿಗಳ ಸಹಜ ಜೀವನ ಕ್ಕೆ ಮರಳಿ ತರುವಂತಹ ವೈದ್ಯಕೀಯ ಪುನಶ್ಚೇತನ ಕೇಂದ್ರಗಳ ಕೊರತೆ ಇರುವುದರೊಂದಿಗೆ ರೋಗಿಗಳು ,ಅವರ ಮನೆಯವರು ಆರ್ಥಿಕ ಕಾರಣ ,ಕಾಯಿಲೆಯ ಬಗ್ಗೆ ಅಲ್ಪ ತಿಳಿವಳಿಕೆ ಹಾಗು ಅನೇಕ ರೀತಿಯ ಚಿಕಿತ್ಸೆಗಳಾದ ಅಲೋಪಥಿ ,ಆಯುರ್ವೇದ, ವಿವಿಧ ನಾಟಿ ಪದ್ಧತಿಗಳ ಮೊರೆ ಹೋಗುವುದು, ಈ ಎಲ್ಲದರ ನಡುವೆ ಗೊಂದಲದಿಂದ ಯಾವುದನ್ನೂ ಸರಿಯಾಗಿ ಉಪಯೋಗಿಸದೆ ಗಡಿ ಬಿಡಿ ಮಾಡಿ ಜೀವನ ಹಾಳು ಮಾಡಿಕೊಂಡ ಉದಾಹರಣೆ ಅನೇಕ ಇವೆ.
ಪಕ್ಷಾಘಾತ/ ಲಕ್ವ ಎಂದರೆ ಏನು ?
ಪಕ್ಷಾಘಾತ /ಪ್ಯಾರಾಲಿಸಿಸ್ ಹಾಗು ಸ್ಟ್ರೋಕ್ ನಡುವೆ ವ್ಯತ್ಯಾಸವಿದ್ದು ಸಾಮಾನ್ಯರು ಎರಡೂ ಕೂಡ ಒಂದೇ ಎಂದು ಭಾವಿಸುತ್ತಾರೆ , ಪಕ್ಷಾಘಾತ/ಪ್ಯಾರಾಲಿಸಿಸ್ ಎಂಬುದು ಕೈ ಕಾಲುಗಳ ದುರ್ಬಲತೆ – ಮಾಂಸ, ನರಗಳು ಅಥವಾ ಸರ್ವ ದೈಹಿಕ ಇತರೆ ಯಾವುದೇ ಖಾಯಿಲೆಗಳ ಕಾರಣದಿಂದ ಆಗಿದ್ದರೂ ಬಳಸುವ ಸಾಮಾನ್ಯ ಪದ.
ಸ್ಟ್ರೋಕ್ ಎಂದರೆ ಏನು ?
ಸ್ಟ್ರೋಕ್ ಎಂಬುದು ಮೆದುಳಿನಲ್ಲಿ ಆಗುವ ರಕ್ತ ಸ್ರಾವ ಅಥವಾ ರಕ್ತದ ಸಂಚಾರಕ್ಕೆ ಆಗುವ ತಡೆಯಿಂದ ಹಠಾತ್ ಆಗಿ ಶರೀರದಲ್ಲಿ ಉತ್ಪತ್ತಿ ಆಗುವ ನರಗಳ ಸಂಜ್ಞೆ ಹಾಗು ಕ್ರಿಯೆಗಳ ಕೊರತೆ, ೯೦ ಪ್ರತಿಶತ ಸ್ಟ್ರೋಕ್ – ಮೆದುಳಿನಲ್ಲಿ ಸ್ಟ್ರೋಕ್ ಆದ ಭಾಗದ ವಿರುದ್ಧ ದಿಕ್ಕಿನ ಪ ಕ್ಷಾಘಾತ ವಾಗಿ ವ್ಯಕ್ತವಾಗುವುದರೊಂದಿಗೆ ವ್ಯಕ್ತಿಯನ್ನು ಪ್ರಜ್ಞಾ ಹೀನನನ್ನಾಗಿಸುವುದ, ಎರಡೆರಡು ಕಾಣುವುದು , ಮಾತನಾಡುವ ನುಂಗುವ ತೊಂದರೆ ಮಾಡುವುದು , ನಡೆಯಲು ಅಸಮತೋಲನ ಮಾಡುವುದು, ಅರ್ಥ ಮಾಡಿಕೊಂಡು ಉತ್ತರಿಸುವ ಸಾಮರ್ಥ್ಯ ಕುಗ್ಗಿಸುವುದು ,ಭಾವನಾತ್ಮಕವಾಗಿ ವ್ಯಕ್ತಿಯನ್ನು ಕುಗ್ಗಿಸುವುದು , ಇತ್ಯಾದಿ ಲಕ್ಷಣಗಳನ್ನು ಉತ್ಪತಿ ಮಾಡುತ್ತವೆ.
ಮೆದುಳಿನ ನಾನಾ ಭಾಗಗಳು ಭಿನ್ನ ಭಿನ್ನ ಕೆಲಸಗಳನ್ನು ನಿರ್ವಹಿಸುವುದು ಹಾಗೂ ಸ್ಟ್ರೋಕ್ ಎಂಬುದು ರೋಗಿಯಿಂದ ರೋಗಿಗೆ ಮೆದುಳಿನ ಬೇರೆ ಬೇರೆ ಭಾಗಗಳಲ್ಲಿ, ಬೇರೆ ಬೇರೆ ಪ್ರಮಾಣದಲ್ಲಿ ಆಗುತ್ತದೆ. ಆದ್ದರಿಂದ ಪ್ರತಿ ಪ್ರಕರಣದಲ್ಲೂ ಸ್ಟ್ರೋಕ್ ಸಂತ್ರಸ್ತ ಮೇಲ್ನೋಟಕ್ಕೆ ಸಾಮಾನ್ಯವಾಗಿ ಕಂಡು ಬಂದರು ಕೂಡ ವೈದ್ಯರ ಪ್ರಕಾರ ಪ್ರತಿ ಸ್ಟ್ರೋಕ್ ಹಾಗು ಸ್ಟ್ರೋಕ್ ರೋಗಿ ಕೂಡ ಬೇರೆ ಬೇರೆಯೇ ಸವಾಲುಗಳನ್ನು ಚಿಕಿತ್ಸೆಗೆ ಎದುರಿಸಬೇಕಾಗುತ್ತದೆ .ದುರದೃಷ್ಟವಶಾತ್ ಇದೇ ಕಾರಣಗಳು ವೈದ್ಯರಿಗೆ ಶೀಘ್ರವಾಗಿ ರೋಗಿಯನ್ನು ಸಾಮಾನ್ಯ ಜೀವನಕ್ಕೆ ತರುವಂತಹ ಚಿಕಿತ್ಸೆ ಹಾಗು ಜೀವನ ಪುನಶ್ಚೇತನ ಗೊಳಿಸುವ ಕಾರ್ಯಕ್ರಮಗಳಿಗೆ ತಡೆ ಗೋಡೆಯಂತೆ ಸವಾಲಾಗಿರುತ್ತದೆ .
ಕಾರಣಗಳು –
ವಾತವನ್ನು ಹೆಚ್ಚು ಮಾಡುವ ಆಹಾರಗಳು –ಜಿಡ್ಡಿನ ಅಂಶ ಇಲ್ಲದ ಒಣ ಆಹಾರ ,ಶೀತ – ತಂಪು ಆಗಿರುವ ಆಹಾರ , ಅಲ್ಪ ಆಹಾರ – ಅಗತ್ಯಕ್ಕಿಂತ ಬಹಳ ಕಮ್ಮಿ ತಿನ್ನುವುದು , ಈ ತರಹದ ಆಹಾರಗಳ ಸತತ ಸೇವನೆ. ಅಂತೆಯೇ ಅತ್ಯಧಿಕ ವ್ಯಾಯಾಮ, ಅಧಿಕ ಜಾಗರಣೆ , ಅಧಿಕ ಮೈಥುನ , ಅಧಿಕ ಉಪವಾಸ , ಶರೀರ ಸಹಜ ಮಲ ಮೂತ್ರಗಳ ಪ್ರವೃತ್ತಿ ತಡೆಯುವುದು , ಅತಿಯಾದ ಚಿಂತೆ ದುಃಖ , ಬೇರೆ ಖಾಯಿಲೆಗೆ ಒಳಗಾಗಿ ಶರೀರ ಅತ್ಯಂತ ದುರ್ಬಲವಾಗಿ ಇರುವುದು , ಹಾಗೂ ಅಪಘಾತಗಳು ,ನಾವು ಬೀಳುವುದು , ನಮಗೆ ಏಟು ಬೀಳುವುದು ಇತ್ಯಾದಿಗಳಿಂದ ಮರ್ಮ ಸ್ಥಾನಗಳಾದ ತಲೆ ಹಾಗು ಬೆನ್ನ ಹುರಿಗೆ ಆಗುವ ಅಭಿಘಾತಗಳು ಈ ಖಾಯಿಲೆಯ ಪ್ರಧಾನ ಕಾರಣಗಳಾಗಿರುತ್ತದೆ .
ತೊಂದರೆಗೆ ಒಡ್ಡುವ ಅಪಾಯಕಾರಿ ಅಂಶಗಳು –
ಅತಿಯಾದ ರಕ್ತದ ಒತ್ತಡ , ಸಕ್ಕರೆ ಖಾಯಿಲೆ ,ಧೂಮಪಾನ ,ಮದ್ಯಪಾನ , ತಂಬಾಕು ಸೇವನೆ ,ಉಪ್ಪಿನ ಅತಿ ಬಳಕೆ ,ಬೊಜ್ಜು , ವ್ಯಾಯಾಮ ಇಲ್ಲದೆ ಇರುವುದು ,ಸಾಮಾನ್ಯವಾಗಿ ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚಾಗಿ ಸ್ಟ್ರೋಕ್ ಆಗುತ್ತದೆ ಆದರೂ ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಟ್ರೋಕ್ಗೊಳಗಾದ ಮಹಿಳೆಯರು ಮರಣ ಹೊಂದುತ್ತಾರೆ .
ಸ್ಟ್ರೋಕ್ ನಿಂದ ಆರೋಗ್ಯವನ್ನು ಪುನಃ ಪಡೆಯುವ ಹಾದಿ ಅಸ್ಪಷ್ಟ ಹಾಗೂ ಕಠಿಣ ವಾಗಿದ್ದಾಗ್ಯೂ ಅದರ ಕೆಲವು ಸಾಧ್ಯತೆಗಳನ್ನು ನಾವು ಅರಿಯಬೇಕು –ಶುರುವಿನಲ್ಲಿ ಅತಿಯಾದ ನಿದ್ರೆಯ ಬಯಕೆ ಮೆದುಳು ಮಾಯುತ್ತಿರುವ ಕಾರಣ ಸಾಮಾನ್ಯವಾಗಿ ಇರುತ್ತದೆ ,ಅಂತೆಯೇ ಮೆದುಳು ಅನೇಕ ಕ್ರಿಯೆಗಳನ್ನು ಹೊಸದಾಗಿ ಮೊದಲ ಬಾರಿಗೇನೋ ಎಂಬಂತೆ ಕಲಿಯುತ್ತಿರುವ ಕಾರಣ ಅತಿಯಾದ ಬಳಲುವಿಕೆ ಆಯಾಸ ಕಂಡುಬರುತ್ತದೆ ,ಮೂರನೆಯದಾಗಿ, ಹೆಚ್ಚಾಗಿ ಮೊದಲ ಮೂರು ತಿಂಗಳು ರೋಗಿಯು ಶೀಘ್ರವಾಗಿ ಗುಣ ಹೊಂದುತ್ತಿರುತ್ತಾನೆ ನಂತರ ಗುಣಮುಖವಾಗುವ ವೇಗ ಕುಂಠಿತವಾಗುತ್ತದೆ ಅದನ್ನು ರೋಗಿ ಹಾಗು ಅವರ ಕಡೆಯವರು ಇಷ್ಟೇ ಗುಣವಾಗುವುದು ಎಂಬ ಭಾವ ತಾಳದೆ ರೋಗಿಯ ಜೀವನದ ಪುನಶ್ಚೇತನ ಕಾರ್ಯಕ್ರಮಗಳನ್ನುಶ್ರದ್ದೆಯಿಂದ ಮುಂದುವರಿಸುವುದರಿಂದ ಮೆದುಳು ತನಗಾದ ಆಘಾತವನ್ನು ನಿವಾರಿಸಿಕೊಂಡು ಮಾಯುವ ಕ್ರಿಯೆಯನ್ನು ಮುಂದುವರಿಸುತ್ತದೆ . ಪ್ರತಿ ಸ್ಟ್ರೋಕ್ ಬೇರೆ ಬೇರೆಯೇ ಆದ ಕಾರಣ ಅದರಿಂದ ಹೊರಬರುವ ಚಿಕಿತ್ಸೆ ಅಥವಾ ಗುಣವಾಗುವ ಅವಧಿಯನ್ನು ರೋಗಿ ಹಾಗು ಮನೆಯವರು ಅರ್ಥಮಾಡಿಕೊಳ್ಳಬೇಕು. ತಮಗೆ ಹಾಗು ಬೇರೆ ಸ್ಟ್ರೋಕ್ ರೋಗಿಗೆ ಹೋಲಿಕೆ ಮಾಡಿಕೊಳ್ಳಬಾರದು , ತಾಳ್ಮೆಯಿಂದ ಸತತ ಪ್ರಯತ್ನ ಮಾಡಿದಾಗ ರೋಗಿ ತನ್ನ ಅತ್ಯುತ್ತಮ ಅರೋಗ್ಯ ಸ್ಥಿತಿ ಮರಳಿ ಪಡೆಯಲು ಸಾಧ್ಯವಾಗುತ್ತದೆ . ಪುನಃ ಪುನಃ ಶರೀರ ಕ್ರಿಯೆಗಳ ಸರಳ ವ್ಯಾಯಾಮಗಳ ,ತಾನು ಮಾಡಬೇಕೆಂಬ ಕೆಲಸಗಳ ಪ್ರಯತ್ನ ಮಾಡುವುದರಿಂದ ಮಾತ್ರ ಮೆದುಳು ಸ್ಟ್ರೋಕ್ ನ ನಂತರ ಮಾಯ್ದು ಸಹಜತೆಗೆ ಬರುತ್ತದೆ .
ಕೆಳಗಿನ ಲಕ್ಷಣಗಳು ಸತತವಾಗಿ ಅಥವಾ ಬಿಟ್ಟು ಬಿಟ್ಟು ಪದೇ ಪದೇ ಕಂಡಾಗ ಜಾಗೃತರಾಗಿ ವೈದ್ಯಕೀಯ ಸಲಹೆಗೆ ಒಳಪಡುವುದು ಒಳಿತು ..ಮಾತನಾಡಲು ಕಷ್ಟ ಆಗುವುದು ಹಾಗು ಬೇರೆಯವರು ಹೇಳಿದ್ದು ಅರ್ಥ ಮಾಡಿಕೊಳ್ಳಲು ಆಗದಿರುವುದು , ಗೊಂದಲಕ್ಕೆ ಒಳಗಾಗುವುದು , ತೊದಲುವುದು , ಕೈ ಕಾಲುಗಳು ,ಮುಖ ಜೋಮು ಹಿಡಿಯುವುದು,ನೋವು ಆಗುವುದು , ದುರ್ಬಲವಾಗುವುದು, ಬಾಯಿ ಒಂದು ಕಡೆ ತಿರುಗುವುದು , ಒಂದು ಅಥವಾ ಎರಡೂ ಕಣ್ಣಿನಲಿ ನೋಡಲು ಕಷ್ಟ ಆಗುವುದು , ಎರಡೆರಡು ಕಾಣುವುದು , ತಲೆನೋವಿನೊಂದಿಗೆ ತಲೆಸುತ್ತು ,ವಾಂತಿ ,ಪ್ರಜ್ಞೆ ತಪ್ಪುವುದು , ನಡೆಯಲು ಕಷ್ಟ ಆಗುವುದು, ಸಮತೋಲನ ಹಾಗು ಕೆಲಸಗಳ ಹೊಂದಾಣಿಕೆ ಕಳೆದುಕೊಳ್ಳುವುದು ,
ಸ್ಟ್ರೋಕ್ ನ ಬಗ್ಗೆ ಇಷ್ಟೊಂದು ನಿಗೂಢ ರಹಸ್ಯ ಯಾಕಿದೆ ?
ಸ್ಟ್ರೋಕ್ ಒಂದು ವಿಶೇಷ ಅವಸ್ಥೆ ಆಗಿದೆ – ಇದರಲ್ಲಿ ಚಿಕಿತ್ಸೆ , ಚಿಕಿತ್ಸೆಯ ಪರಿಣಾಮ , ಅಡ್ಡ ಪರಿಣಾಮ ಹಾಗು ಒಟ್ಟು ಫಲಿತಾಂಶ ರೋಗಿಯಿಂದ ರೋಗಿಗೆ ಅವರ ವಯಸ್ಸು ,ಅವರ ಸಾಮಾನ್ಯ ಆರೋಗ್ಯ ಸ್ಥಿತಿ ,ಮೆದುಳಿನ ಯಾವ ಭಾಗದಲ್ಲಿ ಎಷ್ಟು ದುಷ್ಪರಿಣಾಮ ಆಗಿದೆ , ಮೊದಲೇ ಅಥವಾ ನಂತರ ಪುನಃ ಸ್ಟ್ರೋಕ್ ಆಗಿದೆಯೇ ,ಸ್ಟ್ರೋಕ್ಹ ನ ಕಾರಣ ,ಸ್ಟ್ರೋಕ್ ನ ನಂತರ ನೀಡಿದ ಆರೈಕೆಯ ಗುಣಮಟ್ಟ ,ಜೀವನ ಶೈಲಿ ಇವೆಲ್ಲವುಗಳಿಂದ ವ್ಯತ್ಯಾಸವಾಗಿರುತ್ತದೆ ಹಾಗಾಗಿ ವೈದ್ಯರು , ವೈದ್ಯಕೀಯ ಸಿಬ್ಬಂದಿ ನಿಖರವಾಗಿ ಯಾವುದೇ ಅಭಿಪ್ರಾಯ ಹೆಚ್ಚಾಗಿ ರೋಗಿಯ ಕಡೆಯವರಿಗೆ ಹೇಳುವುದಿಲ್ಲ ,ಈ ಅಸ್ಪಷ್ಟತೆ ರೋಗಿ ಹಾಗು ಅವರ ಕಡೆಯವರು ಗೊಂದಲದಿಂದತಾಳ್ಮೆ ಕಳೆದು ಕೊಂಡು ಬೇರೆ ಬೇರೆ ಚಿಕಿತ್ಸೆ ಗೆ ಬೇರೆ ಬೇರೆ ಊರಿಗೆ ಅಲೆಯುವಂತೆ ಮಾಡುತ್ತದೆ ,
ಸ್ಟ್ರೋಕ್ ನ ಚಿಕಿತ್ಸೆ –
ಚಿಕಿತ್ಸೆ ಎರಡು ಪ್ರಧಾನ ಹಂತಗಳಲ್ಲಿ ನಡೆಯುತ್ತದೆ –ಮೊದಲನೆಯದಾಗಿ ಸ್ಟ್ರೋಕ್ ನಿಂದಾಗಿ
ಮೆದುಳಿನಲ್ಲಿ ಆಗುತ್ತಿರುವ ಉರಿ ಊತ ತಡೆಯಲು ಮಾಡುವ ತುರ್ತು ಚಿಕಿತ್ಸೆ , ಎಷ್ಟು ಶೀಘ್ರ ವಾಗಿ ಮೆದುಳಿನ ರಕ್ತ ಸಂಚಾರ ಪುನಃಸ್ಥಾಪನೆ ಆಗುತ್ತದೋ ಅಷ್ಟು ವ್ಯತಿರಿಕ್ತ ಪರಿಣಾಮಗಳು ಕಮ್ಮಿ ಇರುತ್ತವೆ .
ಎರಡನೆಯದಾಗಿ ಸ್ಟ್ರೋಕ್ ನ ಪರಿಣಾಮವಾಗಿ ಆದ ತೊಂದರೆಗಳಿಂದ ರೋಗಿಯ ಜೀವನ ಪುನಶ್ಚೇತನ ಮಾಡಲು ಮಾಡುವ ಚಿಕಿತ್ಸೆ . ಶರೀರದ ಸಹಜ ಕೆಲಸ ಮಾಡಲು ಕಳೆದುಕೊಂಡ ಸಾಮರ್ಥ್ಯ ಹಾಗು ಚಾತುರ್ಯವನ್ನು ಮರಳಿ ಪಡೆಯಲು ಮಾಡುವ ಚಿಕಿತ್ಸೆಗೆ ಪುನಶ್ಚೇತನ ಚಿಕಿತ್ಸೆ ಎನ್ನುತ್ತೇವೆ ..ಈ ಹಂತದಲ್ಲಿ ಅತ್ಯಂತ ಸಂಯಮದಿಂದ ರೋಗಿಯು ಶರೀರದ
ಚಲನೆಗೆ ಅನುಕೂಲವಾಗುವ ದೈಹಿಕ ತರಬೇತಿ, ನಿತ್ಯ ಜೀವನಕ್ಕೆ ಬೇಕಾಗುವ ಊಟ ಮಾಡುವ ರೀತಿ ,ಬಟ್ಟೆ ಧರಿಸುವ ವಿಧಾನ, ಶೌಚ ಇತ್ಯಾದಿಗಳನ್ನು ಕಲಿಯುವ ವೃತ್ತಿಪರ ತರಬೇತಿ , ಮಾತಿಗೆ ಸಂಬಂಧ ಪಟ್ಟ ವಾಕ್ ತರಬೇತಿ ,ಎಲ್ಲವನ್ನು ಪುನಃ ಪುನಃ ಶ್ರದ್ಧೆಯಿಂದ ಮಾಡಬೇಕು ,ನೆನಪಿರಲಿ ನೀವು ಪ್ರಯತ್ನ ನಿಲ್ಲಿಸಿದರೆ ಮಾತ್ರ ನೀವು ಗುಣವಾಗುವುದು ಕೂಡ ನಿಲ್ಲುತ್ತದೆ .
ಲಕ್ವಾಕ್ಕೆ ಅಲ್ಲಲ್ಲಿ ವಿವಿಧ ರೀತಿಯ ಗೌಪ್ಯ ನಾಟಿ ಔಷಧಿಗಳು ಪ್ರಚಲಿತದಲ್ಲಿ ಇದ್ದು ಹೆಚ್ಚಿನ ಸಂಧರ್ಭದಲ್ಲಿ
ಎಲ್ಲಾ ಪಕ್ಷಾಘಾತ ಹಾಗು ಸ್ಟ್ರೋಕ್ ರೋಗಿಗಳಿಗೆ ಒಂದೇ ತರಹದ ಚಿಕಿತ್ಸೆ ನೀಡುವುದು ಕಂಡು ಬರುತ್ತದೆ ಆದರೆ ಶಾಸ್ತ್ರೀಯವಾಗಿ ಆಯುರ್ವೇದದಲ್ಲಿ ಅತ್ಯಂತ ವಿವರವಾಗಿ ಪಕ್ಷಾಘಾತದ ಕಾರಣ ಹಾಗೂ ರೋಗಿಯ ಪಕ್ಷಾಘಾತ ,ಸ್ಟ್ರೋಕ್ ನ ಹಂತಕ್ಕೆ ಅನುಗುಣವಾಗಿ ಇಂದಿಗೂ ಪರಿಣಾಮಕಾರಿ ಚಿಕಿತ್ಸೆ ಆಗಿನ ಕಾಲದಲ್ಲೇ ವೈಜ್ಞಾನಿಕವಾಗಿ ದಾಖಲಿಸಿರುವುದು ವಿಸ್ಮಯಕಾರಿ ಹಾಗು ಭಾರತೀಯರಾದ ನಾವು ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಪಡುವ ವಿಚಾರವಾಗಿರುತ್ತದೆ .
ಲಕ್ವ ಕ್ಕೆ ರೋಗ ಹಾಗು ರೋಗಿಯ ಹಂತದ ಆಧಾರದಲ್ಲಿ ನೀಡುವ ಆಯುರ್ವೇದದ ವಿಶೇಷ ಶೀಘ್ರ ಪರಿಣಾಮಕಾರಿ ಚಿಕಿತ್ಸೆಗಳು – ಶಿರೋಧಾರ –ಮೆದುಳಿನ ಉರಿ ಊತ ಕಮ್ಮಿ ಮಾಡಲು ಹಣೆ ಹಾಗೂ ತಲೆಯ ಮೇಲೆ ಮಾಡುವ ಶೀತ ಧಾರೆ ,ಪ್ರಧಮನ ನಸ್ಯ – ಮೂರ್ಛೆ ಹೋದ ರೋಗಿಯ ಪ್ರಜ್ಞೆ ಮರಳಿ ಪಡೆಯಲು ಮೂಗಿನ ಮೂಲಕ ಹಾಕುವ ವಿವಿಧ ಔಷಧಿಗಳು , ತೈಲಗಳ ಅಭ್ಯಂಗ/ಮಸಾಜ್ – ಹೆಚ್ಚಿನ ರೋಗಿಗಳು ಮಸಾಜ್ ಪಡೆದುಕೊಳ್ಳುತ್ತಾರೆ ಆದರೂ ಹೊಸ ಲಕ್ವ ಹಾಗೂ ಹಳೆ ಲಕ್ವಾಕ್ಕೆ ಕಾರಣ ಅನುಸಾರ ವಿವಿಧ ತೈಲಗಳ ಬಳಕೆ ಶಾಸ್ತ್ರ ಹೇಳುತ್ತದೆ ,ಸ್ವೇದನ ಶರೀರದಿಂದ ವಿವಿಧ ರೀತಿಯಲ್ಲಿ ಬೆವರು ಬರಿಸುವುದು ರಕ್ತ ಸಂಚಾರ ಹಾಗೂ ಮಾಂಸ ಖಂಡಗಳ ಬಲ ಹೆಚ್ಚಿಸಲು ಉಪಯೋಗಿಸುತ್ತಾರೆ , ಮ್ರಿದು ವಿರೇಚನ ಪಿತ್ತ ಇತ್ಯಾದಿ ದೋಷಗಳ ನಿವಾರಣಾರ್ಥ ,ಶಿರೋ ಬಸ್ತಿ ಶಿರೋ ಪಿಚು ಶಿರಸ್ಸಿನ ಮೇಲೆ ತೈಲಗಳನ್ನು ನಿಲ್ಲಿಸುವುದರಿಂದ ಮೆದುಳು ಬೇಗ ಮಾಯುತ್ತದೆ , ,ಕ್ಷೀರಧುಮ ತಿರುಗಿದ ಮುಖ ಹಾಗೂ ವಾಸನೆ ಗ್ರಹಿಸುವ ಶಕ್ತಿ ಕಮ್ಮಿ ಇದ್ದಾಗ ಹಾಲು ಕಷಾಯಗಳ ಆವಿ ನೀಡುವುದು , ನವರ ಸ್ವೇದ –ವಿಶಿಷ್ಟವಾದ ಅಕ್ಕಿಯನ್ನು ಔಷಧಿಗಳ ಹಾಲು ಕಷಾಯದಲ್ಲಿ ಬೇಯಿಸಿ ಶಾಖ ನೀಡುವುದು ಹಾಗೂ ಹಚ್ಚುವುದು ,ಕಾಯಸೆಕ ಪೂರ್ತಿ ಶರೀರಕ್ಕೆ ಕಷಾಯಗಳನ್ನು ಧಾರೆ ಹಿಡಿಯುವುದು ,ಬಸ್ತಿ – ಮಲದ್ವಾರದ ಮೂಲಕ ಔಷಧಿಗಳನ್ನು ನೀಡಿ ವಾತವನ್ನು ನಿಗ್ರಹಿಸಿ ನರಗಳಿಗೆ ಪುಷ್ಟಿ ನೀಡುವುದು , ಯೋಗ,ಧ್ಯಾನ ,ಆಪ್ತ ಸಲಹೆ / ಕೋನ್ಸೆಲ್ಲಿಂಗ್ –ಹೆಚ್ಚಾಗಿ ಯಾವಾಗಲು ಸ್ಟ್ರೋಕ್ ಆದಾಗ ಹಾಗೂ ನಂತರದ ದಿನಗಳಲ್ಲಿ ಅದು ರೋಗಿ ಹಾಗೂ ಮನೆಯವರ ಜೀವನವನ್ನು ಸಂಪೂರ್ಣವಾಗಿ ವಿವಿಧ ಕಷ್ಟಗಳಿಗೆ ತಳ್ಳುತ್ತದೆ ಈ ಸಂಧರ್ಭನುಸಾರ ಇವರೆಲ್ಲರೂ ವೈದ್ಯರ ಬಳಿ ವಿವರವಾಗಿ ಆಪ್ತಸಲಹೆ ಪಡೆದು ಕಷ್ಟಗಳನ್ನು ದಾಟಿ ಬಂದು ಜೀವನವನ್ನು ಗೆಲ್ಲಬೇಕಾಗುತ್ತದೆ , ಪಥ್ಯಾಹಾರ– ವಾತವ್ಯಾಧಿಗಳಲ್ಲಿ ಶಮನ ಔಷಧಿ ಹಾಗೂ ಪಥ್ಯ ಖಾಯಿಲೆಯಿಂದ ಹೊರಬರಲು ಅತ್ಯಂತ ಸಹಕಾರಿ .
ಆಹಾರಕ್ರಮ ಮತ್ತು ಜೀವನಶೈಲಿ ಮಾರ್ಗದರ್ಶನ:
- ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸಿ: ಹೆಚ್ಚು ಪ್ರಮಾಣದ ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಸಂಪೂರ್ಣ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.
- ಜೀರ್ಣಕ್ರಿಯೆಭಾರವಾದ ಮತ್ತು ಎಣ್ಣೆಯುಕ್ತ ಆಹಾರಗಳನ್ನು ನಿರ್ಬಂಧಿಸಿ: ಹುರಿದ ಆಹಾರಗಳು, ಪ್ರೊಸೆಸ್ ಮಾಡಿದ ಆಹಾರಗಳು ಮತ್ತು ಕೆಂಪು ಮಾಂಸವನ್ನು ಮಿತಿಗೊಳಿಸಿ.
- ಹಗುರ ಮತ್ತು ಪೋಷಕಯುಕ್ತ ಆಹಾರಗಳನ್ನು ಸೇವಿಸಿ: ಹಗುರವಾದ ಸೂಪ್‌ಗಳು, ಸ್ಟ್ಯೂಗಳು ಮತ್ತು ಅಕ್ಕಿ, ಸಜ್ಜೆ ಮುಂತಾದ ಸುಲಭವಾಗಿ ಜೀರ್ಣವಾಗುವ ಧಾನ್ಯಗಳನ್ನು ಸೇರಿಸಿಕೊಳ್ಳಿ.
- ತಪ್ಪಿಸಬೇಕಾದವುಗಳು: ಖಾರವಾದ ಆಹಾರಗಳು, ಹುರಿದ ಆಹಾರಗಳು, ಆಲ್ಕೋಹಾಲ್ ಮತ್ತು ಅತಿಯಾದ ಕೆಫೀನ್ ಅನ್ನು ತಪ್ಪಿಸಿ.
- ಹೈಡ್ರೇಷನ್: ದಿನವಿಡೀ ಸಾಕಷ್ಟು ನೀರು ಮತ್ತು ಗಿಡಮೂಲಿಕೆ ಚಹಾಗಳನ್ನು ಕುಡಿಯಿರಿ.
ಜೀವನಶೈಲಿ ಬದಲಾವಣೆಗಳು:
- ನಿಯಮಿತ ವ್ಯಾಯಾಮ: ವೈದ್ಯರ ಸಲಹೆಯಂತೆ ನಡೆಯುವುದು, ಸೌಮ್ಯ ವ್ಯಾಯಾಮಗಳು ಮತ್ತು ಯೋಗದಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
- ಒತ್ತಡ ನಿರ್ವಹಣೆ: ಧ್ಯಾನ, ಆಳವಾದ ಉಸಿರಾಟ ಮತ್ತು ಮನನದಂತಹ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ.
- ಸಾಕಷ್ಟು ನಿದ್ರೆ: ಪ್ರತಿ ರಾತ್ರಿ 7-8 ಗಂಟೆಗಳ ಉತ್ತಮ ನಿದ್ರೆ ಪಡೆಯಿರಿ.
- ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ: ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ.
- ಧೂಮಪಾನ ಮತ್ತು ಅತಿಯಾದ ಆಲ್ಕೋಹಾಲ್ ಸೇವನೆಯನ್ನು ತಪ್ಪಿಸಿ: ಧೂಮಪಾನ ಮತ್ತು ಅತಿಯಾದ ಆಲ್ಕೋಹಾಲ್ ಸೇವನೆಯು ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ.
ಮರಣ /ಜೀವ ಅಪಾಯದ ಸಾಧ್ಯತೆ –
28ಪ್ರತಿಶತ ರೋಗಿಗಳು 30 ದಿನದ ಒಳಗಾಗಿ ಮರಣಕ್ಕೆ ಒಳಗಾಗುವರು ,1 ವರ್ಷದ ನಂತರ–41 %, 2ರಿಂದ ೫5ವರ್ಷಗಳ ನಂತರ 60% ರೋಗಿಗಳು ಮೃತ ರಾಗುವರು ಇದರಲ್ಲಿ ಹೆಚ್ಚಿನವರು ಇತರೆ ಕಾರಣಗಳಾದ ಹೃದ್ರೋಗ ,ಕ್ಯಾನ್ಸರ್ , ಆತ್ಮಹತ್ಯೆ ಹಾಗು ಅಪಘಾತಗಳಿಂದ ಮರಣ ಹೊಂದುತ್ತಾರೆ .
ಒಟ್ಟಾಗಿ ಸ್ಟ್ರೋಕ್ ಅನ್ನು ಸಮರ್ಪಕವಾಗಿ ಗೆದ್ದು ಬರಲು ಆರೈಕೆ ,ಮೇಲ್ವಿಚಾರಣೆ ,ಮಾನಸಿಕ ಹಾಗು ಭಾವನಾತ್ಮಕ ಚೇತರಿಕೆ, ಪುನರುಜ್ಜೀವನ ಇವೆಲ್ಲವುಗಳು ಸರಿಯಾದ ಪ್ರಮಾಣದಲ್ಲಿ ಬೆರಕೆಯಾಗುವುದು ಅತ್ಯವಶ್ಯ . ತಾಳ್ಮೆ ಹಾಗೂ ಸಹನೆ, ರೋಗ ಲಕ್ಷಣ ಅರ್ಥಮಾಡಿಕೊಳ್ಳುವ ಸಾಮಾನ್ಯ ಜ್ಞಾನವೂ ಚಿಕಿತ್ಸೆಯಲ್ಲಿ ನೆರವಾಗುತ್ತವೆ.
ಡಾ.ಶ್ಯಾಮ ಪ್ರಸಾದ ಪಿ .ಯಸ್ .
ಯೋಗಕ್ಷೇಮ ಆಯುರ್ವೇದ ಆಸ್ಪತ್ರೆ ಕುಶಾಲನಗರ -9036843207